ಡಾ.ಮೋಹನ್ ಮಧುಕರ್ ಭಾಗವತ್ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್) ಆರನೇ ಸರಸಂಘಚಾಲಕರು ಮತ್ತು ರಾಜಕೀಯ ಧುರೀಣ. == ಜನನ == ಸೆಪ್ಟೆಂಬರ್ ೧೧, ೧೯೫೦ರಂದು, ಮಹಾರಾಷ್ಟ್ರದ ಚಂದ್ರಪುರದಲ್ಲಿ ಜನಿಸಿದ ಭಾಗವತರ ತಂದೆ, ಶ್ರೀ ಮಧುಕರ್ ರಾವ್ ಭಾಗವತ್, ಚಂದ್ರಪುರ ಆರ್.ಎಸ್.ಎಸ್ ಕಾರ್ಯವಾಹ/ಕಾರ್ಯದರ್ಶಿಯಾಗಿದ್ದರು. ಮಧುಕರ್ ರಾವ್ ಭಾಗವತ್ ಮುಂದೆ ಗುಜರಾತ್ ಆರ್.ಎಸ್.ಎಸ್ ನ ಪ್ರಾಂತ್ಯ ಪ್ರಚಾರಕರಾದರು.ಭಾಗವತ್ ರ ತಾಯಿ ಮಾಲತಿ ಭಾಗ್ವತ್ ಆರ್.ಎಸ್.ಎಸ್ ಮಹಿಳಾ ವಿಭಾಗದ ಸದಸ್ಯರು. == ಶಿಕ್ಷಣ == ಚಂದ್ರಾಪುರದಲ್ಲಿ ಪಿಯುಸಿ ಮುಗಿಸಿ, ನಾಗಪುರದ ಸರ್ಕಾರಿ ಪಶುವೈದ್ಯ ಕಾಲೇಜಿನಲ್ಲಿ ಪಶುವೈದ್ಯಕೀಯ ಓದಿದ ಭಾಗವತ್, ೧೯೭೫ರಲ್ಲಿ ಪಶುವೈದ್ಯಕೀಯ ಸ್ನಾತಕೋತ್ತರ ಓದನ್ನು ತೊರೆದು, ಆರ್.ಎಸ್.ಎಸ್ ಪ್ರಚಾರಕರಾದರು. == ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿ == ೧೯೭೫-೭೭ರ ತುರ್ತು ಪರಿಸ್ಥಿತಿ ಸಮಯದಲ್ಲಿ ಮಹಾರಾಷ್ಟ್ರದ ಅಕೋಲಾದಲ್ಲಿ ಆರ್.ಎಸ್.ಎಸ್ ಸಂಘಟಕರಾಗಿದ್ದರು ೧೯೯೧-೯೮: ಆರ್.ಎಸ್.ಎಸ್ ನ ಅಖಿಲ ಭಾರತ ಶಾರೀರಿಕ ಪ್ರಮುಖ್. ೧೯೯೯:ಆರ್.ಎಸ್.ಎಸ್ ನ ಅಖಿಲ ಭಾರತ ಪ್ರಚಾರಕ ಪ್ರಮುಖ್ ೨೦೦೦-೨೦೦೯: ಆರ್.ಎಸ್.ಎಸ್ ನ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ೨೦೦೯-ಪ್ರಸಕ್ತ: ಆರ್.ಎಸ್.ಎಸ್ ನ ಸರಸಂಘಚಾಲಕ ೨೦೧೫ರಿಂದ ಕೇಂದ್ರ ಗೃಹ ಸಚಿವಾಲಯ, ಸುಮಾರು 60 ಕಮಾಂಡೋಗಳಿರುವ ಝಡ್ ಪ್ಲಸ್ ಭದ್ರತಾ ತಂಡ ಮೋಹನ್ ಭಾಗವತ್‍‍ರಿಗೆ ಭದ್ರತೆ ನೀಡುತ್ತಿದ್ದಾರೆ. ೨೦೨೩ರ ಜನವರಿಯಲ್ಲಿ ಸಲಿಂಗಿಗಳಿಗೆ ಭಾಗ್ವತ್ ಬೆಂಬಲ ಸೂಚಿಸಿದರು. == ಉಲ್ಲೇಖಗಳು == <>